ಮಲ್ತೊ
	ಉತ್ತರ ದ್ರಾವಿಡ ಭಾಷಾ ಶಾಖೆಗೆ ಸೇರಿದ ಒಂದು ಮುಖ್ಯ ಭಾಷೆ. ಭಾರತದ ಬಿಹಾರ ರಾಜ್ಯದಲ್ಲಿಯ ಸತಾಲ್ ಪರಗಣದ ರಾಜಮಹಲ್ ಗುಡ್ಡಗಾಡು ಪ್ರದೇಶದಲ್ಲಿ ಈ ಭಾಷೆಯನ್ನಾಡುವ ಜನ ಇದ್ದಾರೆ. ಅವರ ಸಂಖ್ಯೆಯ 108,148 (1991).

	ಸ್ವರವ್ಯವಸ್ಥೆಯಲ್ಲಿ / ಇ ಎ ಉ ಓ / ಮತ್ತು ಅವುಗಳ ದೀರ್ಘತೆ ಇದೆ. ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಸಂಸಕಲಿಂಗವೆಂಬ ಮೂರು ಬಗೆಯ ಲಿಂಗವ್ಯವಸ್ಥೆ ಇದೆ. ಪುಲ್ಲಿಂಗ ಏಕವಚನದಲ್ಲಿ ಹಕಾರಾಂತವಾಗಿಯೂ ಸ್ತ್ರೀಲಿಂಗ ಬಹುವಚನದಲ್ಲಿ ರಕಾರಾಂತವಾಗಿಯೂ ಇವೆ. ನಪುಂಸಕಲಿಂಗ ಶೂನ್ಯಪ್ರತ್ಯಯದಿಂದ ಕೂಡಿದೆ. ದ್ವೀತಿಯೆ :_ನ್~_ಎನೆ : ತೃತೀಯೇ :-ನ್ಸ್~-ಎತ್: ಚತುರ್ಥಿ-ಕ್~-ಇಕ್: ಪಂಚಮಿ:-ನೆ~-ಎನೆ~; ಷಷ್ಠಿ:-ನ್~-ಎನ್: ಸಪ್ತಮಿ: ನೊ~-ಎನೊ. ಎಕಾರಾದಿಗಳು ವ್ಯಂಜನಾಂತÀ್ಯ ಪ್ರಕೃತಿಗಳನ್ನು ಉಳಿದವು ಸ್ವರಾಂತ್ಯ ಪ್ರಕೃತಿಗಳನ್ನೂ ಸೇರುತ್ತವೆ. ಪುರುಷವಾಚಕ ಸರ್ವನಾಮಗಳಲ್ಲಿ ಎರಡು ಬಗೆ: ಉತ್ತಮ (ಏನ್) ಮತ್ತು ಮಧ್ಯಮ (ನೀನ್). (ಏಮ್), (ನಾಮ್) ಉತ್ತಮದ ಬಹುವಚನ ರೂಪ. (ನೀಮ್) ಮಧ್ಯಮದ ಬಹುವಚನ ರೂಪ. ದರ್ಶಕ  ಸರ್ವನಾಮಗಳಲ್ಲಿ (ಈ) ಸಮೀಪದರ್ಶಕ ಬಿ ದೂರದರ್ಶಕ. ಅವು ಪ್ರಥಮೆಯಲ್ಲಿ ಏಕವಚನ ರೂಪದಲ್ಲಿ ಮಾತ್ರ ಲಿಂಗ ಪ್ರತ್ಯಯಗಳಿಂದ ಕೂಡಿರುತ್ತವೆ. ನಾಮಗುಣವಾಚಕಗಳಲ್ಲಿ ಮೂಲ ಮತ್ತು ಸಾಧಿಗಳೆಂದು ಎರಡು ವಿಧ. ಉದಾಹರಣೆಗೆ : ತೊರೊ (ಬಾಯಿ) +ಬಲೊ>ತೊರೊ ಬಲೊ (ಬಾಯಿಯಿಲ್ಲದ): ಪುಪು (ಹೂವು)+ಚೋಮ್> ಪುಪ್ಜೋವ್(ಹೂವಿನಂಥ)ಸಂಖ್ಯಾವಾಚಕಗಳಲ್ಲಿ ಒಂದು ಮತ್ತು ಎರಡು ಎಂಬುವುಗಳ ಹೊರತಾಗಿ ಉಳಿದವಲ್ಲ  ಇಂಡೊಆರ್ಯನ್ ಭಾಷೆಗಳಿಂದ ಸ್ವೀಕರಿಸಿದವು. ಕ್ರಿಯಾ ಪ್ರಕೃತಿಗಳಲ್ಲಿ ಭೂತಕಾಲ ಪ್ರತ್ಯಯ ಸೇರಿದಾಗ ಕ್ರಿಯಾ ರೂಪ ಬದಲಾಗುತ್ತದೆ. ಉದಾಹರಣೆಗೆ ಪೆಹ್> ∞ ಪೆತ್ (ಹೆಕ್ಕು) :ಬರ್>∞ ಬಚ್ (ಬರು):ಪೊಯ್> ∞ಪೊಸ್ (ಮಳೆಸುರಿ). ಕಾಲ ಪ್ರತ್ಯಯಗಳು: ವರ್ತಮಾನ {-ಇ}. ಭೂತ {-ಕ್} ಮತ್ತು ಭವಿಷ್ಯತ್ {-ಎ}. ಪುರುಷವಾಚಕ ಪ್ರತ್ಯಯಗಳು:ಏಕವಚನರೂಪ:-ನ್/ ಸ್ವರಾಂತ್ಯ ಪ್ರಕೃತಿ:-ಎನ್/ವ್ಯಂಜನಾಂತÀ್ಯ ಪ್ರಕೃತಿ. ಪುಲ್ಲಿಂಗ-ನೆ./ ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ,-ಇ/ಭೂತ ಮತ್ತು ಸಂಭಾವನಾರ್ಥದಲ್ಲಿ; ಪುಲ್ಲಿಂಗೇತರ:-ಥ್/ವರ್ತಮಾನ ಮತ್ತು ಇಚ್ಛಾರ್ಥಕ ಭಾವರೂಪದಲ್ಲಿ; ಪುಲ್ಲಿಂಗೇತರ:-ಥ್/ವರ್ತಮಾನ ಮತ್ತು ಇಚ್ಚಾರ್ಥಕ ಭಾವ ರೂಪದಲ್ಲಿ :-ಅಹ್/ಭೂತಕಾಲದಲ್ಲಿ:-ಎಹ್/ಸಂಭಾವನಾರ್ಥಕದಲ್ಲಿ: ಪುಲ್ಲಿಂಗೇತರ:-ಥ್/ವರ್ತಮಾನ ಮತ್ತು ಇಚ್ಛಾರ್ಥಕ ಭಾವರೂಪದಲ್ಲಿ;-ಅಥ್/ಭೂತಕಾಲದಲ್ಲಿ: ನಿಥ್/ಭವಿಷ್ಯತ್ಕಾಲದಲ್ಲಿ :-ಇಥ್/ಸಂಭಾವನಾರ್ಥದಲ್ಲಿ : ಬಹುವಚನ ರೂಪ : ಉತ್ತಮ ಪುರುಷ : ಅಸಮಾವೇಶಕ :-ಮ್,-ಎಮ್ : ಸಮಾವೇಶಕ :-ತ್, ಎತ್:ಪರಿಸರ : ಸ್ವರಾಂತ್ಯ ಪ್ರಕೃತಿ(-ಮ್,-ತ್):ವ್ಯಂಜನಾಚಿತ್ಯ ಪ್ರಕೃತಿ (-ಎಮ್,-ಎನ್). ಮಧ್ಯಮ ಪುರುಷ   				ಪ್ರಥಮ ಪುರುಷ
-ನೆರ್						-ನೆರ್/ವ್ಯಂಜನಾಂತ್ಯ ವರ್ತಮಾನ ಪ್ರಕೃತಿ
-ಎರ್						-ಕಲ / ಕಾರಾಂತ ಭೂತ ಸಂಭಾವನಾರ್ಥಕ ಪ್ರಕೃತಿ
-ರ್						-ರ್/ಸ್ವರಾಂತ ಭವಿಷ್ಯತ್ ಮತ್ತು ಇಚ್ಛಾರ್ಥಕ ಪ್ರಕೃತಿ
-ಆರ್ /ಯಕಾರಾಂತ ಭೂತಪ್ರಕೃತಿ
- ಎರ್ /ಲP್ಫರಾಂತ ಸಂಭಾವನಾರ್ಥಕ ಪ್ರಕೃತಿ 

ಮಲ್ತೊ ಭಾಷೆಯ ಮೇಲೆ ಹಿಂದಿ ಬಂಗಾಲೀ ಸಂತಾಲಿ ಮುಂತಾದ ಭಾಷೆಗಳ ಪ್ರಭಾವ ಉಂಟಾಗಿದೆ. ಈ ಭಾಷೆಯಲ್ಲಿ ಲಿಖಿತ ಸಾಹಿತ್ಯವಿರಲಿಲ್ಲ. ಇದರಲ್ಲಿ ಸಾಹಿತ್ಯ ಆರಂಭಿಸಿದವರು ಕ್ರೈಸ್ತ ಧರ್ಮಪ್ರಚಾರಕರು. 1884ಕ್ಕೂ ಮುಂಚಿನ ವರ್ಷಗಳಲ್ಲಿ ಕೀರ್ತನೆಗಳನ್ನೂ ಸುವಾರ್ತೆಗಳನ್ನೂ ರೋಮನ್ ಲಿಪಿಯಲ್ಲಿ ಪ್ರಕಟಿಸಿದರು. ಹಳೆಯ ಒಡಂಬಡಿಕೆ, ಧರ್ಮ, ಕೆತಾಬೆ ಎಂಬ ಶೀರ್ಷಿಕೆಯಲ್ಲಿ ಅವು ಹೊರಬಂದಿವೆ. ಬೈಬಲಿನ ಅನೇಕ ಆವೃತ್ತಿಗಳು ಈ ಭಾಷೆಯಲ್ಲಿ ಪ್ರಕಟವಾಗಿವೆ. ಮಲ್ತೊ ಜನಪದ ಸಾಹಿತ್ಯ ಸಂಗ್ರಹ ಕಾರ್ಯವನ್ನು ಮೊತ್ತಮೊದಲು ಆರಂಭಿಸಿದವರೂ ಕ್ರೈಸ್ತಪಾದ್ರಿಗಳೆ. 1876ರಲ್ಲಿ ರೆ. ಎಫ್. ಟಿ. ಕೋಲ್ ಎಂಬಾತ ಇಂಡಿಯನ್ ಆಂಟಿಕ್ವೆರಿ ಪತ್ರಿಕೆಯಲ್ಲಿ ಮಲ್ತೊ ಜನಪದ ಸಾಹಿತ್ಯವನ್ನೂ ಪ್ರಕಟಿಸಿದ. ಅದರಲ್ಲಿ ಹಾಡುಗಬ್ಬ, ಪ್ರಾರ್ಥನೆ,  ಜೋಗುಳಹಾಡು. ಒಲವಿನ ಹಾಡು. ಸೋಬಾನೆ ಪದ ಇತ್ಯಾದಿ ಹಾಡುಗಳು ವಿಪುಲವಾಗಿವೆ. ಈ ಹಾಡುಗಳಲ್ಲಿ ಲಯದ ಸಾಮರಸ್ಯ ಇರುವುದರಿಂದ ಸಂಗೀತಕ್ಕೂ ನರ್ತನಕ್ಕೂ ಇವು ಸಹಕಾರಿ. ಜನಪದ ಕಥೆಗಳು ಬಡತನದಿಂದ ಆರಂಭವಾಗಿ ಶ್ರೀಮಂತಿಕೆಯಲ್ಲಿ ಕೊನೆಗೊಳುತ್ತವೆ. ಸುಖ ಮತ್ತು ದುಃಖಗಳಲ್ಲಿ ಕೊನೆಗೊಳ್ಳುವ ಅನೇಕ ಕಥೆಗಳಿವೆ. ಸುಖದ ಕಥೆಗಳು ಆಸೆಯನ್ನು ದುಃಖದ ಕಥೆಗಳು ದೈನಂದಿನ ಬಡಬದುಕನ್ನೂ ಪ್ರತಿಬಿಂಬಿಸುತ್ತವೆ.  					
(ಡಬ್ಲೂ. ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ